ಆಕಾಶದಲ್ಲಿ ಸೂರ್ಯ ಮತ್ತು ಚಂದ್ರ ಏಕೆ ವಾಸಿಸುತ್ತಾರೆ
A free resource from
KidsOut - the fun and happiness charity
This story is available in:
This story is available in:
ನೈಜೀರಿಯನ್ ಕಥೆ

*
ಅನೇಕ ವರ್ಷಗಳ ಹಿಂದೆ, ಸೂರ್ಯ ಮತ್ತು ನೀರು ಉತ್ತಮ ಸ್ನೇಹಿತರಾಗಿದ್ದರು, ಮತ್ತು ಇವರಿಬ್ಬರೂ ಭೂಮಿಯ ಮೇಲೆ ಒಟ್ಟಿಗೆ ವಾಸಿಸುತ್ತಿದ್ದರು. ಸೂರ್ಯನು ಆಗಾಗ್ಗೆ ನೀರನ್ನು ಭೇಟಿ ಮಾಡಲು ಹೋಗುತ್ತಿದ್ದನು, ಆದರೆ ನೀರು ಎಂದೂ ಸೂರ್ಯನನ್ನು ಭೇಟಿಯಾಗಲು ಹೋಗುತ್ತಿರಲಿಲ್ಲ.
ಕೊನೆಗೊಮ್ಮೆ ಸೂರ್ಯನು, ಭೇಟಿಯಾಗಲು ಏಕೆ ಬರುವುದಿಲ್ಲ ಎಂದು ನೀರನ್ನು ಕೇಳಿದನು. ಸೂರ್ಯ ನಿನ್ನ ಮನೆ ಸಾಕಷ್ಟು ದೊಡ್ಡದಿಲ್ಲ. ಮತ್ತು ನಾನು ನನ್ನ ಎಲ್ಲಾ ಜನರೊಂದಿಗೆ ಬಂದರೆ, ನೀನೇ ನಿನ್ನ ಮನೆಯಿಂದ ಹೊರ ಓಡಬೇಕಾಗುತ್ತದೆ ಸೂರ್ಯ ಎಂದು ನೀರು ಉತ್ತರಿಸಿತು.
ನಾನು ನಿಮ್ಮನ್ನು ಭೇಟಿಯಾಗಲು ಬರಬೇಕು ಎಂದು ನೀವು ಬಯಸಿದರೆ, ನೀವು ಬೃಹತ್ ಮನೆ ನಿರ್ಮಿಸಬೇಕಾಗುತ್ತದೆ. ಆದರೆ ಅದು ತುಂಬಾ ವಿಶಾಲವಾಗಿರಬೇಕು ಎಂದು ನಾನು ಎಚ್ಚರಿಸುತ್ತೇನೆ. ಏಕೆಂದರೆ ನನಗೆ ಅನೇಕ ಸಂಬಂಧಿಕರು ಮತ್ತು ಸ್ನೇಹಿತರು ಇದ್ದಾರೆ ಮತ್ತು ನಾವು ಬಹಳ ಸ್ಥಳವನ್ನು ತೆಗೆದುಕೊಳ್ಳುತ್ತೇವೆ ಎಂದು ನೀರು ಹೇಳಿತು.
ಸೂರ್ಯನು ಒಂದು ಬೃಹತ್ ಮನೆ ನಿರ್ಮಿಸುವುದಾಗಿ ಭರವಸೆ ನೀಡಿದನು. ಮತ್ತು ಕೂಡಲೇ ಮನೆಗೆ ಹಿಂದಿರುಗಿದನು, ಆತನ ಹೆಂಡತಿ ಚಂದ್ರ ವಿಶಾಲವಾದ ನಗುವಿನೊಂದಿಗೆ ಸ್ವಾಗತಿಸಿದಳು.
ಸೂರ್ಯನು ತಾನು ನೀರಿಗೆ ನೀಡಿದ ಭರವಸೆಯನ್ನು ಚಂದ್ರಳಿಗೆ ಹೇಳಿದನು. ಮತ್ತು ಮರುದಿನವೇ ಅವರು ನೀರನ್ನು, ಅವನ ಎಲ್ಲಾ ಕುಟುಂಬದವರನ್ನು ಮತ್ತು ಸ್ನೇಹಿತರನ್ನು ರಂಜಿಸಲು ದೊಡ್ಡ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದರು. ಅದು ಮುಗಿದ ಬಳಿಕ, ಸೂರ್ಯನು ನೀರನ್ನು ತನ್ನ ಮನೆಗೆ ಆಹ್ವಾನಿಸಿದನು.
ಸೂರ್ಯನ ಮನೆಗೆ ಬಂದಿಳಿದ ನೀರು, ತನ್ನ ಕುಟುಂಬ ಮತ್ತು ಸ್ನೇಹಿತರೆಲ್ಲರೂ ಮನೆ ಪ್ರವೇಶಿಸುವುದು ಸುರಕ್ಷಿತವೇ ಎಂದು ಕೇಳಿದನು. 'ಹೌದು, ನೀವೆಲ್ಲರೂ ಒಳಗೆ ಬರಬಹುದು.’ ಎಂದು ಸೂರ್ಯನು ಉತ್ತರಿಸಿದನು.
ನೀರು ಒಳಗೆ ಹರಿಯಲು ಪ್ರಾರಂಭಿಸಿತು, ಬಳಿಕ ಮೀನು ಮತ್ತು ಇತರೆ ಎಲ್ಲಾ ಪ್ರಾಣಿಗಳು ಹಿಂಬಾಲಿಸಿದವು.
ಶೀಘ್ರದಲ್ಲೇ, ಮನೆಯಲ್ಲಿ ಮೊಣಕಾಲಷ್ಟು ನೀರು ತುಂಬಿತು. ಹಾಗಾಗಿ ಸೂರ್ಯನನ್ನು ಇನ್ನೂ ಒಳ ಹರಿಯುವುದು ಸುರಕ್ಷಿತವೇ ಎಂದು ನೀರು ಕೇಳಿತು, ‘ಹೌದು, ದಯವಿಟ್ಟು ನನ್ನ ಮನೆಗೆ ಬನ್ನಿ’ ಎಂದು ಸೂರ್ಯ ಮತ್ತೆ ಹೇಳಿದ. ಆದ್ದರಿಂದ ನೀರು ಮತ್ತು ಅವನ ಕುಟುಂಬದವರೆಲ್ಲರೂ ಒಳಗೆ ಬರುತ್ತಲೇ ಇದ್ದರು.
ನೀರು ಮನುಷ್ಯನ ತಲೆಯ ಮಟ್ಟದಲ್ಲಿದ್ದಾಗ, ‘ನನ್ನ ಜನರು ಇನ್ನೂ ಹೆಚ್ಚೂ ಬರಬೇಕೆಂದು ನೀವು ಬಯಸುತ್ತೀರಾ?' ಎಂದು ನೀರು ಸೂರ್ಯನಿಗೆ ಕೇಳಿತು,
ಬೇರೆಯ ಉತ್ತರ ತಿಳಿಯದೇ, 'ಹೌದು, ಹೆಚ್ಚು ಬಂದಷ್ಟು ಸಂತೋಷವಾಗಿರುತ್ತದೆ' ಎಂದು ಸೂರ್ಯ ಮತ್ತು ಚಂದ್ರ ಇಬ್ಬರು ಹೇಳಿದರು,
ಇದರಿಂದ ಹೆಚ್ಚೆಚ್ಚು ನೀರಿನ ಸಂಬಂಧಿಕರು ಬರುತ್ತಲೇ ಇದ್ದರು, ಸೂರ್ಯ ಮತ್ತು ಚಂದ್ರರು ಮನೆಯ ಮೇಲ್ಛಾವಣಿಯ ಮೇಲೆ ಕುಳಿತುಕೊಳ್ಳಬೇಕಾಯಿತು. ಮನೆಯ ಮೇಲ್ಛಾವಣಿಯ ಮೇಲೂ ನೀರು ಹರಿಯತೊಡಗಿತು, ಸೂರ್ಯ ಮತ್ತು ಚಂದ್ರ ಇಬ್ಬರೂ ಬಲವಂತವಾಗಿ ಆಕಾಶಕ್ಕೆ ಹೋಗಬೇಕಾಯಿತು....
… ಮತ್ತು ಅಂದಿನಿಂದ ಅವರು ಅಲ್ಲಿಯೇ ಇದ್ದಾರೆ.
Enjoyed this story?