ಇರುವೆ ಮತ್ತು ಆನೆ
A free resource from
KidsOut - the fun and happiness charity
This story is available in:
This story is available in:
ಒಂದು ಅಫ್ಘಾನ್ ಕಥೆ

*
ಮಹಾಬಿಸ್ ಎರಡು ತಂಡಗಳ ನಡುವೆ ಆಡುವ ಆಟ. ಒಂದು ತಂಡವು ತಮ್ಮೆಲ್ಲರ ಕೈಗಳನ್ನು ಹೊದಿಕೆಯ ಕೆಳಗೆ ಇರಿಸಲಾಗುತ್ತದೆ ಮತ್ತು ಸಹ ಆಟಗಾರನ ಅಂಗೈಯಲ್ಲಿ ಉಂಗುರವನ್ನು ಮರೆ ಮಾಡಲಾಗುತ್ತದೆ. ಬಳಿಕ ಅವರು ತಮ್ಮ ಮುಚ್ಚಿರುವ ಕೈಗಳನ್ನು ಮತ್ತೊಂದು ತಂಡಕ್ಕೆ ತೋರಿಸುತ್ತಾರೆ. ಉಂಗುರವು ಯಾವ ಕೈಯಲ್ಲಿ ಅಡಗಿದೆ ಎಂದು ಎದುರಿನ ತಂಡವು ಊಹಿಸಬೇಕು.
ಇರುವೆ ಮತ್ತು ಆನೆ ನಿಜಕ್ಕೂ ಉತ್ತಮ ಸ್ನೇಹಿತರಾಗಿದ್ದರು ಮತ್ತು ಅವಕಾಶ ಸಿಕ್ಕಾಗಲೆಲ್ಲಾ ಒಟ್ಟಿಗೆ ಆಡುತ್ತಿದ್ದರು.
ಸಮಸ್ಯೆ ಏನೆಂದರೆ, ಆನೆಯ ತಂದೆ ತುಂಬಾ ಕಟ್ಟುನಿಟ್ಟು ಮತ್ತು ಮನೆಗೆಲಸಗಳನ್ನು ಮಾಡದೇ ಅಥವಾ ತಾಯಿಗೆ ಅಗತ್ಯವಿದ್ದಾಗ ಸಹಾಯ ಮಾಡದೇ ಮಗ ಆಡುವುದನ್ನು ಇಷ್ಟ ಪಡುತ್ತಿರಲಿಲ್ಲ. ಜೊತೆಗೆ, ತನ್ನ ಮಗ ಇತರ ಆನೆಗಳೊಂದಿಗೆ ಹೆಮ್ಮೆಯಿಂದ ಆಡುವುದನ್ನು ಬಿಟ್ಟು, ತನ್ನ ಸ್ನೇಹಿತ ಇರುವೆಯೊಂದಿಗೆ ಆಟ ಆಡುವುದು ತಂದೆಗೆ ಇಷ್ಟವಾಗುತ್ತಿರಲಿಲ್ಲ.

ಈ ಪುಟ್ಟ ಆನೆ ತನ್ನ ತಂದೆಗೆ ತುಂಬಾ ಹೆದರುತ್ತಿತ್ತು ಮತ್ತು ತಂದೆ ಕೋಪಗೊಳ್ಳುವುದನ್ನು ಇಷ್ಟಪಡುತ್ತಿರಲಿಲ್ಲ. ಆದರೆ ಇರುವೆ ತುಂಬಾ ಕೆಚ್ಚೆದೆಯ ಧೈರ್ಯಶಾಲಿ ಮತ್ತು ಕೋಪಗೊಂಡ ವಯಸ್ಸಾದ ತಂದೆಗೆ ಹೆದರುತ್ತಿರಲಿಲ್ಲ.
ಒಂದು ದಿನ ಇಬ್ಬರು ಸ್ನೇಹಿತರು ಮಹಾಬಿಸ್ ಆಟವನ್ನು ಆಡುತ್ತಿದ್ದರು ಮತ್ತು ಕೋಪಗೊಂಡ ತಂದೆ ಬರುತ್ತಿರುವುದನ್ನು ಕೇಳಿದರು. ನೆಲವು ಭಯಂಕರವಾಗಿ ನಡುಗಿತು ಮತ್ತು ಅಕ್ಕಪಕ್ಕದಲ್ಲಿರುವ ಮರಗಳು ತೂಗಾಡಿದವು.
‘ಅಯ್ಯೋ ಅವರು ನನ್ನ ತಂದೆ !’ ಎಂದು ಮರಿ ಆನೆ ಕೂಗಿತು, ‘ನಾನು ಏನು ಮಾಡಲಿ?’ ಎಂದು ಭಯದೊಂದಿಗೆ ಕೇಳಿತು.

ಪುಟ್ಟ ಇರುವೆ ತನ್ನ ಎದೆಯನ್ನು ಉಬ್ಬಿಸಿ ಎತ್ತರಕ್ಕೆ ನಿಂತಿತು. ‘ಚಿಂತಿಸಬೇಡ, ನನ್ನ ಗೆಳೆಯ, ನೀನು ನನ್ನ ಹಿಂದೆ ಅವಿತುಕೋ. ನಿನ್ನ ತಂದೆಗೆ ನಿನ್ನನ್ನು ಹುಡುಕಲಾಗದು.!’ ಎಂದಿತು
Enjoyed this story?