ಕಾಮನಬಿಲ್ಲಿನ ಸರ್ಪ
A free resource from
KidsOut - the fun and happiness charity
This story is available in:
This story is available in:
ಆಸ್ಟ್ರೇಲಿಯಾದ ಆದಿವಾಸಿಗಳ ಕಥೆ

*
ಬಹಳ ಹಿಂದೆ ಸ್ವಪ್ನ ಯುಗದ ಕಾಲದಲ್ಲಿ ಆದಿವಾಸಿಗಳ ಗುಂಪೊಂದು ಬೇಟೆಯಾಡಲು ಹೊರಟಿತು. ಕೆಲ ಹೊತ್ತಿನ ನಂತರ ಅವರು ದಣಿದಿದ್ದರಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಅವರು ಬೆಂಕಿಯ ಸುತ್ತ ಕುಳಿತು ಕೈಗಳನ್ನು ಬೆಚ್ಚಗಾಗಿಸಿಕೊಳ್ಳುತ್ತ, ಕಥೆಗಳನ್ನು ಹೇಳತೊಡಗಿದರು. ಅದರಲ್ಲಿ ಒಬ್ಬ ತಲೆಯೆತ್ತಿ ನೋಡಿದ.
ಬಾನಂಚಿನಲ್ಲಿ ಮನೋಹರವಾದ ಬಹುವರ್ಣದ ಬಾಗಿದ ಕಾಮನಬಿಲ್ಲು ಇತ್ತು. ಆದರೆ ಅದನ್ನು ಒಂದು ನೀರಿನ ಹೊಂಡದಿಂದ ಇನ್ನೊಂದಕ್ಕೆ ಚಲಿಸುವ ಸರ್ಪ ಎಂದು ಆದಿವಾಸಿಗಳು ಭಾವಿಸಿದರು ಮತ್ತು ಬಹುವರ್ಣದ ಸರ್ಪ ತಮ್ಮ ಬಿಡಾರದ ಸಮೀಪ ಇರುವ ನೀರಿನ ಹೊಂಡದಲ್ಲಿ ವಾಸವಿರದೇ ಇರಲಿ ಎಂದು ಭಯಗೊಂಡರು. ಆದರೆ ಸರ್ಪ ತಮ್ಮ ಸ್ವಂತ ನೀರಿನ ಹೊಂಡದ ಕಡೆ ಚಲಿಸುತ್ತಿಲ್ಲ ಎಂದು ಕೃತಜ್ಞತಾ ಭಾವ ಹೊಂದಿದರು.
ಒಬ್ಬ ಯುವಕ, ಕಾಮನಬಿಲ್ಲಿನ ಸರ್ಪದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದನು. ಹಾಗಾಗಿ ಮನೆಗೆ ಮರಳಿದ ಬಳಿಕ, ಬೇಟೆಗಾರರು ಕಾಮನಬಿಲ್ಲಿನ ಸರ್ಪಕ್ಕೆ ಏಕೆ ಹೆದರುತ್ತಾರೆ ಎಂದು ತನ್ನದೇ ಬುಡಕಟ್ಟಿನ ವೃದ್ಧನನ್ನು ಕೇಳಿದನು.
ಭೂಮಿಯು ಸ್ವಪ್ನಯುಗದ ಕಾಲದಲ್ಲಿ ರೂಪಿಸಿದ ಜೀವಿನಗಳಲ್ಲಿ ಕಾಮನಬಿಲ್ಲಿನ ಸರ್ಪವೂ ಒಂದಾಗಿದೆ ಎಂದು ವೃದ್ಧ ಹೇಳಿದ.

ಆರಂಭದಲ್ಲಿ ಭೂಮಿ ಸಮತಟ್ಟಾಗಿತ್ತು. ಕಾಮನಬಿಲ್ಲಿನ ಸರ್ಪವು ಭೂಮಿಯ ಉದ್ದಗಲವು ಚಲಿಸಿದಂತೆ ಪರ್ವತಗಳನ್ನು ಸೃಷ್ಠಿಯಾದವು ಮತ್ತು ನದಿಗಳು ತಂಗುವ ಕಣಿವೆಗಳನ್ನು ರೂಪುಗೊಂಡವು. ಕಾಮನಬಿಲ್ಲಿನ ಸರ್ಪವು ಸ್ವಪ್ನಯುಗದ ಸಮಯದ ಜೀವಿಗಳಲ್ಲಿ ದೊಡ್ಡವನಾಗಿತ್ತು ಮತ್ತು ಆತನ ಶಕ್ತಿಯು ಇತರೆ ಜೀವಿಗಳನ್ನು ಹೆದರಿಸುವಂತಿತ್ತು.
ಅಂತಿಮವಾಗಿ, ಭೂಮಿಯನ್ನು ರೂಪಿಸುವ ಪ್ರಯತ್ನದಿಂದ ದಣಿದ ಕಾಮನಬಿಲ್ಲಿನ ಸರ್ಪವು ನೀರಿನ ಹೊಂಡದೊಳಗೆ ತೆವಳಿಕೊಂಡು ಹೋಯಿತು ಮತ್ತು ತಂಪಾದ ನೀರಿನಲ್ಲಿ ಮಲಗಿತು, ಅದು ಅವನನ್ನು ಶಾಂತಗೊಳಿಸಿತು ಮತ್ತು ಮತ್ತು ಅವನ ದೇಹದಲ್ಲಿರುವ ಗಾಢ ಬಣ್ಣಗಳನ್ನು ಮೃದುಗೊಳಿಸಿತು.
ಪ್ರತಿ ಬಾರಿ ಪ್ರಾಣಿಗಳು ನೀರಿನ ಹೊಂಡಕ್ಕೆ ಭೇಟಿ ನೀಡಿದಾಗಲೂ, ನೀರಿಗೆ ತೊಂದರೆಯಾಗದಂತೆ ಅವರು ಎಚ್ಚರಿಕೆ ವಹಿಸುತ್ತಿದ್ದರು, ಏಕೆಂದರೆ ಅವರು ಅವನನ್ನು ನೋಡದೇ ಹೋದರೂ ಅವನು ಅಲ್ಲಿಯೇ ಇದ್ದಾನೆ ಎಂದು ಅವರಿಗೆ ತಿಳಿದಿತ್ತು.
ಭಾರೀ ಬಿರುಗಾಳಿ ಸಹಿತ ಮಳೆಯಾಗಿ ನೀರಿನ ಗುಂಡಿ ತೊಂದರೆಗೊಳಗಾಗಿ ಮತ್ತು ಸೂರ್ಯನ ಕಿರಣಗಳು ಅವನ ದೇಹವನ್ನು ಸ್ಪರ್ಶಿಸಿದ ಬಳಿಕವೇ ಅವನು ಹೊರ ಬರುತ್ತಿದ್ದನು. ಬಳಿಕ ನೀರಿನ ಗುಂಡಿಯಿಂದ ಮೇಲಕ್ಕೆರಿ ಮರಗಳ ತುದಿಯಿಂದ ಮೋಡಗಳ ಮೇಲೆ ಮತ್ತು ಬಯಲು ಪ್ರದೇಶವನ್ನು ದಾಟಿ ಮತ್ತೊಂದು ನೀರಿನ ಹೊಂಡಕ್ಕೆ ಪಯಣಿಸುತ್ತಿದ್ದ.
ಕಾಮನಬಿಲ್ಲಿನ ಸರ್ಪ ಕೋಪಗೊಂಡರೆ ಮತ್ತು ಭೂಮಿಯನ್ನು ಮತ್ತೊಮ್ಮೆ ಮಂಥನ ಮಾಡಿದರೆ ಎಂದು ಜನರು ಭಯಭೀತರಾಗುತ್ತಾರೆ. ಆದ್ದರಿಂದ ಅವನು ಒಂದು ನೀರಿನ ಹೊಂಡದಿಂದ ಮತ್ತೊಂದು ನೀರಿನ ಹೊಂಡಕ್ಕೆ ಹೋಗಿ ನೀರಿನ ಕೆಳಗೆ ಕಣ್ಮರೆಯಾಗುವವರೆಗೂ, ಕಣ್ಣಿಗೆ ಕಾಣಿಸದೇ ಇರುವವರೆಗೂ ಅವರು ಶಾಂತವಾಗಿರುತ್ತಾರೆ ಮತ್ತು ನಿಶ್ಚಲವಾಗಿರುತ್ತಾರೆ.
ಆದ್ದರಿಂದಲೇ ಮಳೆಬಿಲ್ಲಿನ ಸರ್ಪ ಆಕಾಶದಾದ್ಯಂತ ಚಲಿಸಿ ಒಂದು ನೀರಿನ ಹೊಂಡದಿಂದ ಇನ್ನೊಂದು ನೀರಿನ ಹೊಂಡಕ್ಕೆ ಹೋಗುವಾಗ ಅದಕ್ಕೆ ತೊಂದರೆಯಾಗದಂತೆ ಜಾಗರೂಕರಾಗಿರುತ್ತಾರೆ.
Enjoyed this story?