KidsOut World Stories

ಜಾದುವಿನ ಗಂಜಿಯ ಮಡಿಕೆ Mary Smith    
Previous page
Next page

ಜಾದುವಿನ ಗಂಜಿಯ ಮಡಿಕೆ

A free resource from

Begin reading

This story is available in:

 

 

 

 

 

 

 

ಜಾದುವಿನ ಗಂಜಿಯ ಮಡಿಕೆ

 

 

 

 

 

 

 

 

 

ಬಡ ಹುಡುಗಿಯೊಬ್ಬಳು ತನ್ನ ತಾಯಿಯೊಂದಿಗೆ ಪಟ್ಟಣದಲ್ಲಿ ವಾಸಿಸುತ್ತಿದ್ದಳು.  ಅವರು ಹಸಿವಿನಿಂದ ಬಳಲುತ್ತಿದ್ದರು,ಆದರೆ ಅವರಿಗೆ ತಿನ್ನಲು ಏನೂ ಇರಲಿಲ್ಲ.

‘ನಾನು ಅಣಬೆಗಳು ಮತ್ತು ಹಣ್ಣುಗಳನ್ನು ಹುಡುಕಲು ಕಾಡಿಗೆ ಹೋಗುತ್ತೇನೆ,’ ಎಂದು ಹುಡುಗಿ ಹೇಳಿದಳು. 

ಅಲ್ಲಿ ಅವಳು ಓರ್ವ ವೃದ್ಧೆಯನ್ನು ಭೇಟಿಯಾದಳು, 'ಈ ಮಡಿಕೆಯನ್ನು ತಗೋ. ನೀನು ಈ ಮಡಿಕೆಗೆ :‘ಮಡಿಕೆ ಬೇಯಿಸು!’ ಎಂದು ಹೇಳಿದಾಗ ಅದು ನಿನಗೆ ರುಚಿಯಾದ ಗಂಜಿ ತಯಾರಿಸುತ್ತದೆ. ನೀನು: ‘ಮಡಿಕೆ ನಿಲ್ಲಿಸು!’ ಎಂದು ಹೇಳಿದಾಗ ಅದು ಅಡುಗೆ ಮಾಡುವುದನ್ನು ನಿಲ್ಲಿಸುತ್ತದೆ.’ ಎಂದು ಹೇಳಿದಳು. 

‘ಧನ್ಯವಾದಗಳು ನಿಮಗೆ, ತುಂಬಾ ಧನ್ಯವಾದಗಳು,’ ಎಂದು ಹುಡುಗಿ ಹೇಳಿದಳು, ಮತ್ತು ಅವಳು ಉಡುಗೊರೆಯೊಂದಿಗೆ ಮನೆಯ ಕಡೆ ಹೊರಟಳು. 

ಮನೆಯಲ್ಲಿ ಹುಡುಗಿ, ‘ಮಡಿಕೆ ಬೇಯಿಸು!’ ಎಂದು ಹೇಳಿದಳು

ಮಡಿಕೆ ತಯಾರಿಸಿದ ಗಂಜಿಯು ಸಿಹಿಯಾಗಿತ್ತು ಮತ್ತು ರುಚಿಯಾಗಿತ್ತು. ಕೊನೆಯಲ್ಲಿ ತಾಯಿ ಮತ್ತು ಮಗಳು ಸಂತೃಪ್ತಿಗೊಂಡರು. 

ಮಡಿಕೆ ನಿಲ್ಲಿಸು! 'ಎಂದು ಹುಡುಗಿ ಹೇಳಿದಳು, ಮತ್ತು ಮಡಿಕೆಯು ಗಂಜಿಯನ್ನು ತಯಾರಿಸುವುದನ್ನು ನಿಲ್ಲಿಸಿತು. 

ಒಂದು ದಿನ ಆ ಹುಡುಗಿ ಸ್ನೇಹಿತರನ್ನು ಭೇಟಿಯಾಗಲು ಹೋದಳು. ನಂತರ , ಆಕೆಯ ತಾಯಿಗೆ ಹಸಿವಾಯಿತು, ಆದ್ದರಿಂದ ಆಕೆ,‘ಮಡಿಕೆ ಬೇಯಿಸು!’ ಎಂದು ಹೇಳಿದಳು.

ಆಕೆಯ ತಾಯಿ ತಿನ್ನತೊಡಗಿದಳು. ಆದರೆ ಆಕೆಯ ಬಳಿ ಸಾಕಷ್ಟು ಗಂಜಿ ತಯಾರಾದ ಬಳಿಕ, ಮಡಿಕೆಗೆ ಗಂಜಿ ತಯಾರಿಸುವುದನ್ನು ನಿಲ್ಲಿಸಲು ಬಳಸುವ ಸರಿಯಾದ ಪದವನ್ನು ಆಕೆ ಮರೆತಿದ್ದಳು. 

ಮಡಿಕೆ ಬೇಯಿಸಿತು... ಮತ್ತು ಬೇಯಿಸಿತು... ಮತ್ತು ಬೇಯಿಸುತ್ತಲೇ ಇತ್ತು! ಕೂಡಲೇ ಅಡುಗೆಮನೆ ಗಂಜಿಯಿಂದ ತುಂಬಿತು! ಶೀಘ್ರದಲ್ಲೇ ಮನೆಯೂ ಗಂಜಿಯಿಂದ ತುಂಬಿತು! ರಸ್ತೆ ಮತ್ತು ನೆರೆಹೊರೆಯವರ' ಮನೆಗಳು ಗಂಜಿಯಿಂದಲೇ ತುಂಬಿ ಹೋಯಿತು!

ಕೊನೆಗೂ ಹುಡುಗಿ ಮನೆಗೆ ಮರಳಿದಳು. 

‘ಮಡಿಕೆ ನಿಲ್ಲಿಸು!’ ಎಂದು ಗಟ್ಟಿಯಾಗಿ ಕೂಗಿದಳು.

ಮತ್ತೆಂದೂ ಮಡಿಕೆ ಗಂಜಿಯನ್ನು ತಯಾರಿಸಲಿಲ್ಲ. ಆದರೆ ಜನರೆಲ್ಲರೂ ಅವರ ಮನೆಗೆ ಹಿಂದಿರುಗಲು ಅಲ್ಲಿ ತುಂಬಿರುವ ಗಂಜಿಯನ್ನು ತಿಂದು ಖಾಲಿ ಮಾಡಬೇಕಾದ ಪರಿಸ್ಥಿತಿ ಬಂದೊದಗಿತು.!

Enjoyed this story?
Find out more here