KidsOut World Stories

ಜಾದೂವಿನ ವರ್ಣಕುಂಚ    
Previous page
Next page

ಜಾದೂವಿನ ವರ್ಣಕುಂಚ

A free resource from

Begin reading

This story is available in:

 

 

 

 

ಜಾದೂವಿನ ವರ್ಣಕುಂಚ

ಒಂದು ಚೀನೀಯರ ಜಾನಪದ ಕಥೆ

 

 

 

 

 

*

ಒಂದಾನೊಂದು ಕಾಲದಲ್ಲಿ, ಮಾ ಲಿಯಾಂಗ್ ಎಂಬ ಒರ್ವ ಯುವಕನಿದ್ದ. ಆತ ಬಡವನಾಗಿದ್ದ ಮತ್ತು ಕರುಣಾಮಯಿಯಾಗಿದ್ದ. ಆತನಿಗೆ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ ಇತ್ತು ಮತ್ತು ಅವನು ಎಲ್ಲ ಕಡೆಗಳಲ್ಲಿ ಚಿತ್ರ ಬಿಡಿಸುತ್ತಿದ್ದ. ಒಂದು ರಾತ್ರಿ ಒಬ್ಬ ವೃದ್ಧ ಜಾದುವಿನ ವರ್ಣಕುಂಚ ನೀಡಿದಂತೆ ಮತ್ತು ಅದರ ಮೂಲಕ ಬಡ ಜನರಿಗೆ ಸಹಾಯಕ್ಕೆ ಬಳಸಲು ಆತ ಕೇಳಿಕೊಂಡಂತೆ ಯುವಕನಿಗೆ ಕನಸು ಬಿತ್ತು. ಆತ ಎಚ್ಚರಗೊಂಡಾಗ ತನ್ನ ಮೇಜಿನ ಮೇಲೆ ಜಾದುವಿನ ವರ್ಣಕುಂಚ ಕಂಡುಕೊಂಡ.

ಆ ದಿನದಿಂದ, ಬಡವರಿಗೆ ಸಹಾಯ ಬೇಕಾದಾಗಲೆಲ್ಲಾ ಆತ ಜಾದುವಿನ ವರ್ಣಕುಂಚ ಬಳಸತೊಡಗಿದ. ಗದ್ದೆಗಳಲ್ಲಿ ನೀರಿಲ್ಲದೇ ಜನರು ಕಷ್ಟಪಡುತ್ತಿರುವುದನ್ನು ಕಂಡಾಗ ಆತ ನದಿಯ ಚಿತ್ರ ಬಿಡಿಸಿದ ಮತ್ತು ಆ ನದಿಯು ಜೀವ ಪಡೆದು ಹರಿಯತೊಡಗಿತು. ಜನರು ಆ ನದಿಯಿಂದ ನೀರನ್ನು ತಂದು ಬೆಳೆ ಬೆಳೆಯಲು ಉಪಯೋಗಿಸಿದರು. ಕಷ್ಟಪಟ್ಟು ದುಡಿಯುವ ರೈತರು ತಮ್ಮ ಕುಟುಂಬವನ್ನು ಪೋಷಿಸಲು ಹೆಣಗಾಡುತ್ತಿರುವುದನ್ನು ಕಂಡು, ಅವರಿಗೆ ಸಹಾಯ ಮಾಡಲು ಆತ ಹೆಚ್ಚಿನ ಆಹಾರ ಬಿಡಿಸಿದ. ಕೆಲವೇ ದಿನಗಳಲ್ಲಿ ಜನರು ಜಾದುವಿನ ವರ್ಣಕುಂಚದ ಬಗ್ಗೆ ತಿಳಿದುಕೊಂಡರು ಮತ್ತು ಅವರು ಮಾ ಲಿಯಾಂಗ್ ಚಿತ್ರಗಾರನಿಗೆ ಕೃತಜ್ಞರಾಗಿದ್ದರು.   

ಆದರೆ ಹಳ್ಳಿಯಲ್ಲಿ, ಒಬ್ಬ ಶ್ರೀಮಂತ ವ್ಯಕ್ತಿ ವಾಸಿಸುತ್ತಿದ್ದನು. ಆತ ಯುವಕನಿಂದ ವರ್ಣಕುಂಚ ಕದಿಯಲು ನಿರ್ಧರಿಸಿ, ಅದನ್ನು ಬಳಸಿ ಇನ್ನಷ್ಟು ಶ್ರೀಮಂತನಾಗಲು ಬಯಸಿದ. ಹಾಗಾಗಿ ಜಾದುವಿನ ವರ್ಣಕುಂಚ ಕದಿಯಲು ಮಾ ಲಿಯಾಂಗ್ ಮನೆಗೆ ತನ್ನ ಸೇವಕನನ್ನು ಕಳುಹಿಸಿದ.

ಜಾದುವಿನ ವರ್ಣಕುಂಚ ಪಡೆದು ಶ್ರೀಮಂತ ವ್ಯಕ್ತಿ ತುಂಬಾ ಸಂತಸಗೊಂಡನು ಮತ್ತು ಹೊಸ ಸ್ವತ್ತನ್ನು ತೋರಿಸಲು ತನ್ನ ಸ್ನೇಹಿತರನ್ನು ಮನೆಗೆ ಆಹ್ವಾನಿಸಿದನು. ಅವನು ಬಹಳಷ್ಟು ಚಿತ್ರಗಳನ್ನು ಬಿಡಿಸಿದನು, ಆದರೆ ಅವುಗಳಲ್ಲಿ ಯಾವುದೂ ಜೀವ ಪಡೆದು ಎದ್ದು ಬರಲಿಲ್ಲ. 

ವರ್ಣಕುಂಚವು ತನಗಾಗಿ ಕೆಲಸ ಮಾಡಲಿಲ್ಲ ಎಂದು ತಿಳಿದು ಅವನು ತುಂಬಾ ಕೋಪಗೊಂಡನು. ಆದ್ದರಿಂದ ಮಾ ಲಿಯಾಂಗ್ ಅನ್ನು ಸೆರೆ ಹಿಡಿದು ತರಲು ಕಳುಹಿಸಿದನು. 

“ನೀನು ನನಗಾಗಿ ಕೆಲವು ಚಿತ್ರಗಳನ್ನು ರಚಿಸಿ, ಅವುಗಳನ್ನು ಜೀವಂತಗೊಳಿಸಿದರೆ ನಾನು ನಿನ್ನನ್ನು ಬಿಡುಗಡೆ ಮಾಡುತ್ತೇನೆ” ಎಂದು ಶ್ರೀಮಂತನು ಯುವಕನಿಗೆ ಹೇಳಿದನು. 

ಮಾ ಲಿಯಾಂಗ್ ಅಂತಹ ಕೆಟ್ಟ ವ್ಯಕ್ತಿಗೆ ಸಹಾಯ ಮಾಡಲು ಮನಸಿರಲಿಲ್ಲ, ಆದರೆ ಅವನ ಬಳಿ ಒಂದು ಉಪಾಯವಿತ್ತು.

“ನಾನು ಏನನ್ನು ಬಿಡಿಸಬೇಕು ಎಂದು ನೀವು ಬಯಸುತ್ತೀರಿ?”ಎಂದು ಕೆಟ್ಟ ವ್ಯಕ್ತಿಗೆ ಯುವಕ ಕೇಳಿದ.

“ನನಗೆ ಒಂದು ಚಿನ್ನದ ಪರ್ವತ ಬೇಕು. ನಾನು ಅಲ್ಲಿಗೆ ಹೋಗಿ ಚಿನ್ನವನ್ನು ಸಂಗ್ರಹಿಸುತ್ತೇನೆ” ಎಂದು ಶ್ರೀಮಂತ ಹೇಳಿದನು. 

ಆದರೆ ಯುವಕನು ಮೊದಲಿಗೆ ಸಮುದ್ರ ಚಿತ್ರವನ್ನು ರಚಿಸಿದನು.

 “ನೀವು ಸಮುದ್ರವನ್ನು ಏಕೆ ಬಿಡಿಸಿರುವೆ? ನನಗೆ ಒಂದು ಚಿನ್ನದ ಪರ್ವತ ಬೇಕು. ಅದನ್ನು ಬೇಗನೆ ಬಿಡಿಸು!” ಎಂದು ಕೋಪಗೊಂಡ ಶ್ರೀಮಂತ ಹೇಳಿದನು. 

ಹಾಗಾಗಿ ಯುವಕನು ಸಮುದ್ರದಿಂದ ಬಹಳ ದೂರದಲ್ಲಿ ಒಂದು ಚಿನ್ನದ ಪರ್ವತವನ್ನು ಬಿಡಿಸಿದ. 

“ಬೇಗನೆ ಒಂದು ದೊಡ್ಡ ಹಡಗನ್ನು ರಚಿಸು. ನಾನು ಅಲ್ಲಿಗೆ ಹೋಗಿ ಚಿನ್ನವನ್ನು ಸಂಗ್ರಹಿಸಲು ಬಯಸುತ್ತೇನೆ” ಎಂದು ಶ್ರೀಮಂತ ಹೇಳಿದ. 

ಯುವಕ ಮುಗುಳ್ನಕ್ಕ ಮತ್ತು ಒಂದು ದೊಡ್ಡ ಹಡಗನ್ನು ಚಿತ್ರಿಸಿದ. ಶ್ರೀಮಂತನು ಹಡಗಿಗೆ ಹಾರಿದನು ಮತ್ತು ಚಿನ್ನವನ್ನು ಹುಡುಕಲು ಹೊರಟನು.  ಆದರೆ ಹಡಗು ಸಮುದ್ರದ ಮಧ್ಯಕ್ಕೆ ಸಾಗಿದಾಗ, ಮಾ ಲಿಯಾಂಗ್ ದೊಡ್ಡ ಅಲೆಯನ್ನು ಸಹ ಬಿಡಿಸಿದ. ಅದು ಹಡಗನ್ನು ನಾಶಪಡಿಸಿತು ಮತ್ತು ಈ ಶ್ರೀಮಂತ ವ್ಯಕ್ತಿಯು ಎಂದಿಗೂ ಹಳ್ಳಿಯಲ್ಲಿ ಕಾಣಿಸಲಿಲ್ಲ. ಅದಾದ ಬಳಿಕ ಯುವಕ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಬಾಳಿದ ಮತ್ತು ಜಾದುವಿನ ವರ್ಣಕುಂಚವನ್ನು ಬಡವರಿಗೆ ಸಹಾಯ ಮಾಡಲು ಬಳಸಿದ.

ಯುವಕನ ಜಾದುವಿನ ವರ್ಣಕುಂಚ ಸಾಮಾನ್ಯ ಜನರಿಂದ ಹಿಡಿದು ವಯೋವೃದ್ಧರಿಗೂ ತಿಳಿದಿತ್ತು ಮತ್ತು ಎಲ್ಲರೂ ಅವನನ್ನು ಪ್ರೀತಿಸುತ್ತಿದ್ದರು. 

Enjoyed this story?
Find out more here