KidsOut World Stories

ಆಮೆ ಮತ್ತು ಮೊಲ KidsOut    
Previous page
Next page

ಆಮೆ ಮತ್ತು ಮೊಲ

A free resource from

Begin reading

This story is available in:

 

 

 

 

 ಆಮೆ ಮತ್ತು ಮೊಲ

 

 

 

 

 

 

 

 

 

*

ಒಂದಾನೊಂದು ಕಾಲದಲ್ಲಿ, ದೂರದ ಹೊಲದಲ್ಲಿ ಚುರುಕಾದ ಮತ್ತು ಖುಷಿಯಾದ ಮೊಲ ಮತ್ತು ತೂಕಡಿಸುವ ಆಮೆ ಇತ್ತು. 

ನೋಯೆಲ್ ಸಂತೋಷಭರಿತವಾದ ಮೊಲವಾಗಿತ್ತು ಮತ್ತು ಆರ್ಚಿಬಾಲ್ಡ್ ತೂಕಡಿಸುವ ಆಮೆ ಆಗಿತ್ತು. ಆರ್ಚಿಬಾಲ್ಡ್ ಆಮೆ ಕುಳಿತುಕೊಂಡು ತನ್ನ ಊಟವನ್ನು ನಿಧಾನವಾಗಿ ಅಗಿದು ತಿನ್ನಲು ಇಷ್ಟಪಡುತ್ತಿತ್ತು, ಅದೇ ಸಮಯದಲ್ಲಿ ನೋಯೆಲ್ ಮೊಲವು ತನ್ನ ಊಟವನ್ನು ಗಬಗಬನೆ ನುಂಗುತ್ತಿತ್ತು ಮತ್ತು ಆರ್ಚಿಬಾಲ್ಡ್ ತಲೆ ತಿರುಗುವ ತನಕ ಸುತ್ತಲೂ ಸುತ್ತುತ್ತ ಓಡುತ್ತಿತ್ತು.  

ಒಂದು ದಿನ, ಅವರಿಬ್ಬರ ನಡುವೆ ಚರ್ಚೆಯಾಯಿತು. 

‘ಸಂಪೂರ್ಣ ವಿಶಾಲ ಜಗತ್ತಿನಲ್ಲಿ ನಾನು ಅತ್ಯಂತ ವೇಗದ ಪ್ರಾಣಿ' ಎಂದು ನೋಯೆಲ್ ಹೇಳಿತು. 'ನಾನು ಸೊಕ್ಕಿನ ಚೀತಾ, ಒದೆಯುವ ಕಾಂಗರೂ ಮತ್ತು ಓಡುವ  ಮೊಲಕ್ಕಿಂತಲೂ ವೇಗವಾಗಿದ್ದೇನೆ' ಎಂದು ಬಡಾಯಿಕೊಚ್ಚಿತು. 

‘ಓಹ್ ಸುಮ್ಮನಿರು,’ಆರ್ಚಿಬಾಲ್ಡ್ ನಿಟ್ಟುಸಿರುಬಿಟ್ಟನು. ‘ನೀನು ಸ್ವಯಂ ಗೀಳಿನಿಂದ ತುಂಬಿದ್ದೀಯ! ನೀನು  ಜಾಗರೂಕರಾಗಿರದಿದ್ದರೆ ಜಿಗುಟಾದ ಅಂತ್ಯ ಕಾಣುವೆ’ ಎಂದು ಹೇಳಿತು. 

'ಹಾಗಾದರೆ ಜಿಗುಟಾದ ಅಂತ್ಯ ಎಲ್ಲಿದೆ?' 'ಇಲ್ಲಿಂದ ಬಹಳ ದೂರದಲ್ಲಿದೆಯೇ? ಎಂದು ನೋಯೆಲ್ ಕೇಳಿತು. 

ತನ್ನ ಕಣ್ಣುಗಳನ್ನು ಆರ್ಚಿಬಾಲ್ಡ್ ತಿರುಗಿಸಿದ ಮತ್ತು ರುಚಿಕರವಾದ ಸೊಪ್ಪುಗಳನ್ನು ಮೆಲ್ಲುವುದನ್ನು ಮುಂದುವರಿಸಿದ.

‘ಓಹ್, ನೀವಿಬ್ಬರೂ ವಾದಿಸುವುದನ್ನು ನಿಲ್ಲಿಸಿ' ಎಂದು ಕಪ್ಪು ಹಕ್ಕಿಯೊಂದು ಹಾರಿಕೊಂಡು ಹೋಗುವಾಗ ಹೇಳಿತು.

'ಇಲ್ಲ,ಇದು ಗಂಭೀರವಾಗಿದೆ ', 'ನಾನು ಇಡೀ ವಿಶ್ವದಲ್ಲೇ ಅತ್ಯಂತ ವೇಗದ ಪ್ರಾಣಿ ಎಂದು ನಾನು ನಿಮಗೆ ಸಾಬೀತುಪಡಿಸುತ್ತೇನೆ!' ಎಂದು ನೋಯೆಲ್ ಮೊಲ ಹೇಳಿತು.

'ಸರಿ,' ಆರ್ಚಿಬಾಲ್ಡ್ ಆಮೆ ಹೇಳಿತು. ‘ಹಾಗಾದರೆ ನಾನು ನಿನ್ನ ಜೊತೆ ಓಟದ ಪಂದ್ಯ ಮಾಡುತ್ತೇನೆ!’ ಎಂದಿತು.

ನೋಯೆಲ್ ಮೊಲ ತನ್ನ ತಲೆ ತಗ್ಗಿಸಿ ನಕ್ಕಿತು.

‘ನೀವು ಕಾದು ನೋಡಿ,’ ‘ನಮಗಾಗಿ ಓಟದ ಪಂದ್ಯವನ್ನು ಆಯೋಜಿಸಲು ನಾನು ವ್ಯಾಲೇಸ್ ಎಂಬ ಬುದ್ಧಿವಂತ ವೃದ್ಧ ಗೂಬೆಯನ್ನು ಕರೆತರುತ್ತೇನೆ' ಎಂದು ಆರ್ಚಿಬಾಲ್ಡ್ ಹೇಳಿದ.

ಮರುದಿನವೇ ವಯಸ್ಸಾದ ಬುದ್ದಿವಂತ ಗೂಬೆ  ವ್ಯಾಲೇಸ್ ಓಟದ ಪಂದ್ಯಾವಳಿ ಏರ್ಪಡಿಸಿತು. ಹೊಲದಲ್ಲಿದ್ದ ಎಲ್ಲಾ ಪ್ರಾಣಿಗಳು ತಮ್ಮ ಬಳಿ ಇರುವ ಅತ್ಯುತ್ತಮವಾದ ಬಟ್ಟೆಗಳನ್ನು ಧರಿಸಿ ಬಂದಿದ್ದವು, ತಮ್ಮ ಪುಕ್ಕಗಳನ್ನು ಅಲಂಕರಿಸಿಕೊಂಡದ್ದವು, ಧ್ವಜ ಕೈಯಲ್ಲಿ ಹಿಡಿದಿದ್ದವು ಮತ್ತು ಮೊಲ ಮತ್ತು ಆಮೆಯನ್ನು ಹುರಿದುಂಬಿಸಲು ಸಿದ್ಧವಾಗಿದ್ದವು. 

‘ನಿಮ್ಮ ಗುರುತುಗಳ ಮೇಲೆ! ತಯಾರಾಗಿ! ಹೊರಡಿ!' ಎಂದು ವ್ಯಾಲೇಸ್ ಹೇಳಿದ.  ಮತ್ತು ಓಟದ ಪಂದ್ಯಾವಳಿ ಆರಂಭಗೊಂಡಿತು!

ನಿಧಾನವಾಗಿ , ಸಾವಕಾಶವಾಗಿ, ಆರ್ಚಿಬಾಲ್ಡ್ ಆಮೆ ಹೊರಟಿತು ಮತ್ತು ಬೇಗ ಬೇಗನೇ ನೋಯೆಲ್ ಮೊಲ ಓಡಿತು ಮತ್ತು ಕ್ಷಣಾರ್ಧದಲ್ಲಿ ಯಾರ ಕಣ್ಣಿಗೂ ಕಾಣದಂತೆ ಮಾಯವಾಯಿತು. ವಾಸ್ತವದಲ್ಲಿ, ಅವನು ಎಷ್ಟು ಮುಂದಿದ್ದನೆಂದರೆ, ಅವನು ಹಿಂತಿರುಗಿ ನೋಡಿದಾಗ, ಆರ್ಚಿಬಾಲ್ಡ್ ಆಮೆ ಎಲ್ಲಿಯೂ ಕಾಣಿಸಲಿಲ್ಲ.

ಅಯ್ಯೋ, ‘ನಾನು ಈಗಾಗಲೇ ಹೆಚ್ಚು ಕಡಿಮೆ ಗೆದ್ದಿದ್ದೇನೆ! ಇಂದು ತುಂಬಾ ಬಿಸಿಯಾದ ದಿನ. ನಾನು ಈ ಮರದ ಕೆಳಗೆ ಸ್ವಲ್ಪ ಸಮಯ ನಿದ್ರೆ ಮಾಡುತ್ತೇನೆ ಎಂದು ನೋಯೆಲ್ ಯೋಚಿಸಿದ. ಶೀಘ್ರದಲ್ಲೇ ನೋಯೆಲ್ ಮೊಲವು ಗಾಢ ನಿದ್ರೆಗೆ ಜಾರಿತು. 

ಈ ನಡುವೆ, ಆರ್ಚಿಬಾಲ್ಡ್ ಆಮೆ ತನ್ನ ಚಿಪ್ಪಿನ ಮೇಲೆ ಸೂರ್ಯನ ಶಾಖವನ್ನು ಆನಂದಿಸುತ್ತಾ ನಿಧಾನವಾಗಿ ಚಲಿಸಿತು. ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ, ಆಗಾಗ ಹುಲ್ಲಿನ ತುಂಡುಗಳನ್ನು ತಿನ್ನುತ್ತ ನಿಧಾನವಾಗಿ ಚಲಿಸಿದನು. ಮೆಲ್ಲನೇ ಚಲಿಸುತ್ತ ದೇವದಾರು ಮರ ದಾಟಿದ. ಆಯಾಸದಿಂದಲೇ ನಡೆದು ಸೇತುವೆಯನ್ನು ದಾಟಿದ. ಪ್ರಯಾಸದಿಂದ ಕೊಟ್ಟಿಗೆಯನ್ನು ಸಹ ದಾಟಿದ. ಇಷ್ಟೇ ಅಲ್ಲದೇ ಮರದ ಕೆಳಗೆ ನಿದ್ರಿಸಿ ಗೊರಕೆ ಹೊಡೆಯುತ್ತಿದ್ದ ನೋಯೆಲ್  ಮೊಲವನ್ನು ದಾಟಿದ. 

ಆರ್ಚಿಬಾಲ್ಡ್ ಕೊನೆಯ ಗೆರೆ ಬರುವವರೆಗೂ ಮೆಲ್ಲ ಮೆಲ್ಲನೆ ನಡೆಯುತ್ತಲೇ ಇದ್ದನು. ಅಲ್ಲಿ ಬುದ್ದಿವಂತ ವೃದ್ದ ಗೂಬೆ ವ್ಯಾಲೇಸ್ ಮತ್ತು ಹೊಲದಲ್ಲಿದ್ದ ಇತರ ಎಲ್ಲಾ ಪ್ರಾಣಿಗಳು ಒಟ್ಟುಗೂಡಿದರು. 

ಈ ಎಲ್ಲಾ ಪ್ರಾಣಿಗಳು ಆರ್ಚಿಬಾಲ್ಡ್ ಸುತ್ತಲೂ ಗುಂಪುಗೂಡಿ ಹರ್ಷೋದ್ಗಾರ ಮಾಡಿದರು ಮತ್ತು ಹುರಿದುಂಬಿಸಿದರು.

‘ಶಭಾಷ್! ಶಭಾಷ್! ನೀನೇ ವಿಜೇತ!’

ಈ ಎಲ್ಲ ಶಬ್ದವು ನೋಯೆಲ್ ಮೊಲವನ್ನು ಗಾಬರಿಯಿಂದ ಎಚ್ಚರಗೊಳಿಸಿತು.

ಓ ನನ್ನ! ಓ ನನ್ನ! ಏನಾಗುತ್ತಿದೆ? ಈ ಎಲ್ಲ ಸದ್ದು ಗದ್ದಲ ಏನು? ಪರವಾಗಿಲ್ಲ. ನಾನು  ಓಟದ ಪಂದ್ಯಾವಳಿಯನ್ನು ಮುಗಿಸುವುದು ಉತ್ತಮ, ಬಳಿಕ ನಾನು ಹೋಗಿ ರಾತ್ರಿ ಊಟ ಮಾಡಬಹುದು,’ ಎಂದು ಈತ ಯೋಚಿಸಿದ. 

ನೋಯೆಲ್ ಮೊಲ ಬೆಟ್ಟದ ಕೆಳಗೆ ಅಂತಿಮ ಗೆರೆಯ ಕಡೆಗೆ ಓಡಿತು. ಆದರೆ ಅವನು ಅಲ್ಲಿಗೆ ತಲುಪಿದಾಗ, ಆರ್ಚಿಬಾಲ್ಡ್ ಕುತ್ತಿಗೆಯಲ್ಲಿ ವಿಜಯದ ಸಂಕೇತವಾದ ಚಿನ್ನದ ಪದಕವನ್ನು ದಿಗಿಲುಗೊಂಡು ನೋಡಿದನು. 

‘ಇದು ಸರಿಯಾಗಿರಲು ಸಾಧ್ಯವಿಲ್ಲ! ಇವನು ಮೋಸ ಮಾಡಿರಬೇಕು', ಎಂದು ನೋಯೆಲ್ ಮೊಲ ಕೂಗಿತು. ‘ನಾನು ಅವನಿಗಿಂತ ವೇಗವಾಗಿದ್ದೇನೆ ಎಂದು ಎಲ್ಲರಿಗೂ ತಿಳಿದಿದೆ!’ ಎಂದ. 

‘ಆರ್ಚಿಬಾಲ್ಡ್ ಆಮೆ ಮೋಸ ಮಾಡಲಿಲ್ಲ’ ಎಂದು ವೃದ್ಧ ಬುದ್ಧಿವಂತ ಗೂಬೆ ವ್ಯಾಲೇಸ್ ಹೇಳಿದ.‘ಅವನು ಪ್ರಾಮಾಣಿಕವಾಗಿ ಮತ್ತು ನ್ಯಾಯದ ಚೌಕಟ್ಟಿನಲ್ಲಿಯೇ ಗೆದ್ದಿದ್ದಾನೆ. ನಿಧಾನವಾಗಿ ಮತ್ತು ಖಚಿತವಾಗಿ ಎಂದೂ ಬಿಟ್ಟುಗೊಡದೇ, ಆರ್ಚಿಬಾಲ್ಡ್ ಮೊದಲು ಅಂತಿಮ ಗೆರೆಯನ್ನು ತಲುಪಿದ್ದಾನೆ.' ಎಂದು ಹೇಳಿದ. 

ನೋಯೆಲ್ ಮೊಲವು ತುಂಬಾ ದುಃಖಿಯಾಗಿ ಮತ್ತು ಮುನಿಸಿಕೊಂಡಂತೆ ಕಂಡುಬಂದ. ಆರ್ಚಿಬಾಲ್ಡ್ ಆಮೆ ಅವನ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮತ್ತು ಅವನ್ನು ಹುರಿದುಂಬಿಸಲು ಯತ್ನಿಸಿದ.

‘ನೋಯೆಲ್ ನನ್ನು ಹುರಿದುಂಬಿಸಿ, ಇದು ಕೇವಲ ಓಟವಾಗಿತ್ತು,’ ‘ಮುಂದಿನ ಬಾರಿ ನಿನಗೆ ಗೆಲುವು ಎಂದು ನನಗೆ ಖಾತ್ರಿಯಿದೆ. ಮತ್ತು ಸೂರ್ಯನ ಕೆಳಗೆ ನಡೆಯುವ  ಪ್ರತಿಯೊಂದು ಓಟದ ಪಂದ್ಯಾವಳಿಯನ್ನು ಗೆಲ್ಲುವುದಕ್ಕಿಂತ ನಾವು ಎಂದೆಂದಿಗೂ ಸ್ನೇಹಿತರಾಗಿರುವುದನ್ನು ನಾನು ಬಯಸುತ್ತೇನೆ’ ಎಂದು ಆರ್ಚಿಬಾಲ್ಡ್ ಹೇಳಿದ. 

ಮತ್ತು ಆ ದಿನದಿಂದ, ಇವರು ಅತ್ಯುತ್ತಮ ಸ್ನೇಹಿತರಾದರು ಮತ್ತು ನೋಯೆಲ್ ಮೊಲ ಎಂದೂ ಜಂಬ ಪಡಲಿಲ್ಲ. 

Enjoyed this story?
Find out more here