ಜಿಂಕೆ ಮತ್ತು ಜಾಗ್ವಾರ್
A free resource from
KidsOut - the fun and happiness charity
This story is available in:
This story is available in:
ಬ್ರೆಜಿಲಿಯನ್ ಕಥೆ

*
ಜಿಂಕೆಯು ಕಾಡಿನಲ್ಲಿ ದೊಡ್ಡ ನದಿಯ ಉದ್ದಕ್ಕೂ ನಡೆಯಿತು: "ಓಹ್, ನನಗೆ ಯಾವ ರೀತಿಯ ಜೀವನ ಸಿಕ್ಕಿತು? ಮನೆ ಇಲ್ಲ. ಬಹುಶಃ ನಾನೇ ಮನೆ ಕಟ್ಟಿಕೊಳ್ಳುತ್ತೇನೆ. ಇಲ್ಲಿ ಉತ್ತಮ ಸ್ಥಳವಿದೆ.
ಜಿಂಕೆ ಮುಂದುವರೆಯಿತು.
ಕಾಡಿನಲ್ಲಿ ನಿಧಾವಾಗಿ ಚಲಿಸುತ್ತ ಜಾಗ್ವಾರ್ ದೊಡ್ಡ ನದಿಯ ಮೂಲಕ ಬಂದಿತು. ಅದು ಕೂಡ ಅದೇ ಸ್ಥಳಕ್ಕೆ ಬಂದಿತು: ‘ಅಯ್ಯೋ, ನನ್ನ ಜೀವನವೇನು? ಬಹುಶಃ ಒಂದು ದಿನ ನಾನು ನೆಲೆಗೊಳ್ಳುತ್ತೇನೆ ಮತ್ತು ನಾನೇ ಮನೆ ಮಾಡಿಕೊಳ್ಳುತ್ತೇನೆ. ಇಲ್ಲಿ ಬೇರೆಯದಕ್ಕಿಂತ ಉತ್ತಮ ಸ್ಥಳವಾಗಿದೆ.
ಮತ್ತು ಜಾಗ್ವಾರ್ ಮುಂದುವರೆಯಿತು.
ಜಿಂಕೆ ಹಿಂತಿರುಗಿತು, ಮತ್ತು ತನ್ನ ಉತ್ತಮವಾದ ಕೊಂಬುಗಳಿಂದ ಪೊದೆಗಳನ್ನು ಖಾಲಿಮಾಡಿತು, ಮರಗಳನ್ನು ತೆರವುಗೊಳಿಸಿತು ಮತ್ತು ತನ್ನ ಮನೆಯನ್ನು ನಿರ್ಮಿಸಲು ನೆಲವನ್ನು ಮಟ್ಟ ಮಾಡಿತು ಮತ್ತು ನಂತರ ಕಾಡಿಗೆ ಹೊರಟಿತು.
ಈಗ ಜಾಗ್ವಾರ್ ಬಂತು: ‘ಇದು ನನ್ನ ಮನೆ ಕಟ್ಟಲು ಇದ್ದ ಜಾಗ, ಆದರೆ ನೆಲವನ್ನು ತೆರವುಗೊಳಿಸಿ ಸಮತಟ್ಟು ಮಾಡಲಾಗಿದೆ. ಸ್ಪಷ್ಟವಾಗಿ, ಇದು ತುಪಾನ್ ದೇವರ ಆಶಿರ್ವಾದ. ಇಲ್ಲಿ ನಾನು ನನ್ನ ಮನೆಯನ್ನು ಕಟ್ಟಿಕೊಳ್ಳುತ್ತೇನೆ.’ ಉತ್ಸಾಹದಿಂದ, ಜಾಗ್ವಾರ್ ನೆಲವನ್ನು ಚಪ್ಪಟೆಗೊಳಿಸಿತು ಮತ್ತು ನುಣುಪುಗೊಳಿಸಿತು ಮತ್ತು ತನಗಾಗಿ ನೆಲವನ್ನು ಮಾಡಿತು - ತನ್ನ ಗಟ್ಟಿಯಾದ ಮತ್ತು ಹೊಳೆಯುವ ಹಲ್ಲುಗಳಿಂದ ಅವನಿಗೆ ಸಹಾಯವಾಯಿತು - ನಂತರ ಕಾಡಿಗೆ ಹೋಯಿತು.
ಜಿಂಕೆ ಮರಳಿತು: ‘ಒಂದು ನೆಲವನ್ನು ನುಣುಪಾಗಿ ಮತ್ತು ಗಟ್ಟಿಯಾಗಿ ಮಾಡಲಾಗಿದೆ. ತುಪಾನ್ ದೇವರು ನನಗೆ ಸಹಾಯ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿದೆ.’ ಮತ್ತು ಹೊಸ ಶಕ್ತಿಯೊಂದಿಗೆ ಜಿಂಕೆ ಮನೆಗೆ ಗೋಡೆಗಳನ್ನು ನಿರ್ಮಿಸಿತು. ಕೆಲಸ ಮುಗಿಸಿದ ನಂತರ, ಜಿಂಕೆ ಕಾಡಿಗೆ ಹೋಯಿತು.

ಈಗ ಜಾಗ್ವಾರ್ ಬಂದಿತು: ‘ತೂಪಾನ್ ದೇವರು ನನ್ನ ಮನೆಗೆ ಗೋಡೆಗಳನ್ನು ನಿರ್ಮಿಸಿದ್ದಾನೆ. ಈಗ ನಾನು ಛಾವಣಿಯನ್ನು ಮಾಡುತ್ತೇನೆ.’ ಮತ್ತು ಬಲವಾದ ಜಾಗ್ವಾರ್ ಛಾವಣಿಯನ್ನು ಮಾಡಿತು ಮತ್ತು ಅದು ಪೂರ್ಣಗೊಂಡ ನಂತರ ಅದು ಕಾಡಿಗೆ ಹೋಯಿತು.
ಮೇಲ್ಛಾವಣಿ ನಿರ್ಮಿಸಿರುವುದನ್ನು ಜಿಂಕೆ ನೋಡಿತು: 'ತುಪನ್ ದೇವರು ನಿಜವಾಗಿಯೂ ನನ್ನನ್ನು ಆಶೀರ್ವದಿಸಿದೆ.’
ಜಿಂಕೆ ಮನೆೆಯೊಳಗೆ ಎರಡು ಕೋಣೆಗಳನ್ನು ಮಾಡಿತು: ಒಂದು ತನಗಾಗಿ ಮತ್ತು ಇನ್ನೊಂದು ತುಪನ್ ದೇವರಿಗಾಗಿ. ಅವನು ಒಂದು ಕೋಣೆಯ ಒಳಗೆ ಹೋಗಿ ವಿಶ್ರಾಂತಿ ಪಡೆಯಿತು ಮತ್ತು ಕತ್ತಲಾಗುತ್ತಿದ್ದಂತೆ ನಿದ್ರಿಸಿತು.
ಇದೀಗ ಜಾಗ್ವಾರ್ ಹಿಂತಿರುಗಿತು ಮತ್ತು ಮನೆಯಲ್ಲಿ ಎರಡು ಕೊಠಡಿಗಳನ್ನು ನೋಡಿತು: ‘ತುಪನ್ ನನ್ನೊಂದಿಗೆ ಮನೆಯನ್ನು ಹಂಚಿಕೊಳ್ಳಲು ತನಗಾಗಿ ಒಂದು ಕೋಣೆಯನ್ನು ನಿರ್ಮಿಸಿದ್ದಾನೆ.’
ಅದು ಮತ್ತೊಂದು ಕೊಠಡಿಗೆ ತೆರಳಿತು ಮತ್ತು ಮಲಗಿತು.
ಜಿಂಕೆ ಮತ್ತು ಜಾಗ್ವಾರ್ ಒಂದೇ ಮನೆಯಲ್ಲಿ ರಾತ್ರಿಯಿಡೀ ಮಲಗಿದ್ದವು. ಮುಂಜಾನೆ, ಇಬ್ಬರೂ ಎಚ್ಚರಗೊಂಡರು.
ಜಿಂಕೆ ಜಾಗ್ವಾರ್ ಅನ್ನು ನೋಡಿತು. ಜಾಗ್ವಾರ್ ಜಿಂಕೆಯತ್ತ ನೋಡಿತು: 'ನನ್ನ ಮನೆಯನ್ನು ನಿರ್ಮಿಸಲು ನೀನು ಸಹಾಯ ಮಾಡಿದ್ದೀಯಾ?'
‘ನಾನು ಮಾಡಿದ್ದೇನೆ. ನನ್ನ ಮನೆಯನ್ನು ಕಟ್ಟಲು ನೀನೂ ಸಹಾಯ ಮಾಡಿದ್ದೀಯಾ?’
‘ನಾನು ಮಾಡಿದ್ದೇನೆ’
ಹಾಗಾಗಿ ಜಾಗ್ವಾರ್ ಮತ್ತು ಜಿಂಕೆಯ ಮನೆಯನ್ನು ಸಾಮರಸ್ಯದಿಂದ ಹಂಚಿಕೊಂಡವು ... ಸ್ವಲ್ಪ ಸಮಯದವರೆಗೆ ಮಾತ್ರ.

ಜಾಗ್ವಾರ್ ಹಸಿದಿತ್ತು: ‘ಬೆಂಕಿ ಹೆಚ್ಚಿ. ಒಂದು ಮಡಿಕೆಯಲ್ಲಿ ನೀರನ್ನು ಕುದಿಯಲಿಡು. ನಾನು ಬೇಟೆಯಾಡಲು ಹೋಗುತ್ತಿದ್ದೇನೆ.’ ಎಂದು ಹೇಳಿ ಜಾಗ್ವಾರ್ ಮನೆಯಿಂದ ಹೊರಟು ಹೋಯಿತು ಮತ್ತು ಜಿಂಕೆ ಬೆಂಕಿ ಹಚ್ಚಿತು ಮತ್ತು ನೀರು ಕುದಿಸಲು ಪಾತ್ರೆಯನ್ನು ಸಿದ್ಧಪಡಿಸಿತು.
ಜಾಗ್ವಾರ್ ಜಿಂಕೆಯನ್ನು ಹಿಡಿದು ಕೊಂದಿತು. ಅದು ಜಿಂಕೆಯನ್ನು ಹೊತ್ತು ಮನೆಗೆ ಬಂದಿತು. ಜಿಂಕೆಯನ್ನ ಬೇಯಿಸಲು ಪ್ರಾರಂಭಿಸಿತು. ಜಾಗ್ವಾರ್ ಅಡುಗೆ ಮಾಡುತ್ತಿರುವುದನ್ನು ಜಿಂಕೆ ನೋಡಿತು, ಜಿಂಕೆಗೆ ದುಃಖವಾಯಿತು.
ಜಾಗ್ವಾರ್ ತಿನ್ನಲು ಪ್ರಾರಂಭಿಸಿತು. ಜಿಂಕೆ ಹೆದರತೊಡಗಿತು ಮತ್ತು ಅದಕ್ಕೆ ತಿನ್ನಲು ಸಾಧ್ಯವಾಗಲಿಲ್ಲ. ಜಿಂಕೆ ತನ್ನ ಕೋಣೆಗೆ ಹೋಗಿ ಮಲಗಲು ಪ್ರಯತ್ನಿಸಿತು.
ಜಾಗ್ವಾರ್ ತನ್ನ ಕೋಣೆಗೆ ಹೋಯಿತು.
ರಾತ್ರಿಯಿಡೀ, ಜಾಗ್ವಾರ್ ಬಂದು ತನ್ನನ್ನು ಕಬಳಿಸುತ್ತದೆ ಎಂದು ಜಿಂಕೆ ಭಯಗೊಂಡಿತ್ತು ಮತ್ತು ಅದು ತನ್ನ ಕಣ್ಣುಗಳನ್ನು ತೆರದುಕೊಂಡೇ ಇತ್ತು.
*
ಬೆಳಗ್ಗೆ, ಜಿಂಕೆ ಜಾಗ್ವಾರ್ ಗೆ ಹೇಳಿತು: 'ಬೆಂಕಿಯನ್ನು ಹಚ್ಚು. ಬಾಣಲೆಯನ್ನು ಇಡು. ನೀರನ್ನು ಕುದಿಸು. ನಾನು ಬೇಟೆಯಾಡಲು ಹೋಗುತ್ತಿದ್ದೇನೆ.'
ಜಿಂಕೆ ಕಾಡಿಗೆ ಹೋಯಿತು. ಅಲ್ಲಿ, ಮರದ ತೊಗಟೆಗೆ ತನ್ನ ಉಗುರುಗಳನ್ನು ತೀಕ್ಷ್ಣವಾಗಿ ಹರಿತಗೊಳಿಸುವುದು ಜಾಗ್ವಾರ್ ಆಗಿತ್ತು.
ಇರುವೆ ಭಕ್ಷಕ ತಮಂಡುವಾ ಸಿಗುವವರೆಗೂ ಜಿಂಕೆ ಮುಂದುವರೆಯಿತು.
‘ಆ ಜಾಗ್ವಾರ್ ನಿನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದೆ.’

ತಮಂಡುವಾ ಕೋಪಗೊಂಡಿತು. ಅವನು ಹೋಗಿ ತನ್ನ ಬಲವಾದ, ಹರಿತವಾಗಿರುವ ಈ ಉಗುರುಗಳಿಂದ ಜಾಗ್ವಾರ್ ಮೇಲೆ ದಾಳಿ ಮಾಡಿತು. ಜಾಗ್ವಾರ್ ಕೊಲ್ಲಲ್ಪಟ್ಟಾಗ, ತಮಂಡುವಾ ಹೊರಟುಹೋಯಿತು. ಸತ್ತ ಜಾಗ್ವಾರನ್ನು ಜಿಂಕೆ ಮನೆಗೆ ಸಾಗಿಸಿತು.
ಜಿಂಕೆ ಏನು ಅಡುಗೆ ಮಾಡುತ್ತಿದೆ ಎಂದು ಜಾಗ್ವಾರ್ ನೋಡಿದಾಗ ಅದು ಭಯಗೊಂಡಿತು. ಜಿಂಕೆ ಊಟ ಮಾಡುವುದನ್ನು ನೋಡಲು ಅದಕ್ಕೆ ಸಾಧ್ಯವಾಗಲಿಲ್ಲ ಆದ್ದರಿಂದ ಅದು ತನ್ನ ಕೋಣೆಗೆ ಹೋಯಿತು. ಆದರೆ ಎಲ್ಲರಿಗೂ ತಿಳಿದಿರುವಂತೆ ಜಿಂಕೆಗಳು ಜಾಗ್ವಾರ್ ಮಾಂಸವನ್ನು ತಿನ್ನುವುದಿಲ್ಲ.
ಈಗ ಜಿಂಕೆ ತನ್ನ ಕೋಣೆಗೆ ಹೊರಟಿತು. ಜಿಂಕೆಗೆ ನಿದ್ರೆ ಬರಲಿಲ್ಲ. ರಾತ್ರಿಯಲ್ಲಿ ಜಾಗ್ವಾರ್ ಬಂದು ತನ್ನನ್ನು ತಿನ್ನಬಹುದು ಎಂದು ಜಿಂಕೆ ಹೆದರುತ್ತಿತ್ತು.
ಜಾಗ್ವಾರ್ ಕೂಡ ನಿದ್ರೆ ಮಾಡಲಿಲ್ಲ. ರಾತ್ರಿಯಲ್ಲಿ ಜಿಂಕೆ ಬಂದು ತನ್ನನ್ನು ತಿನ್ನುತ್ತದೆ ಎಂದು ಅದು ಹೆದರುತ್ತಿತ್ತು. ಕೊನೆಗೆ ಜಾಗ್ವಾರ್ ಮಂಪರಿನಿಂದ ನಿದ್ರೆಗೆ ಜಾರಿತು.
ಜಿಂಕೆ ಕೊನೆಗೂ ತಲೆಯಾಡಿಸಿ ನಿದ್ರೆಗೆ ಜಾರಲು ಆರಂಭಿಸಿತು. ಅದು ತಲೆ ಅಲ್ಲಾಡಿಸುತ್ತಿದ್ದಂತೆ, ಕೊಂಬುಗಳು ಗೋಡೆಗೆ ಬಡಿದು ದೊಡ್ಡ ಸದ್ದನ್ನು ಮಾಡಿತು. ಜಿಂಕೆ ತನ್ನ ಮೇಲೆ ದಾಳಿ ಮಾಡಲು ಬರುತ್ತಿದೆ ಎಂದು ಹೆದರಿ, ಜಾಗ್ವಾರ್ ಎಚ್ಚರಗೊಂಡು ಕಿರುಚಿತ್ತಾ ಹೊರಗೋಡಿತು.
ಜಾಗ್ವಾರ್ ತನ್ನನ್ನು ಕೊಲ್ಲಲು ಬರುತ್ತಿದ್ದಾನೆ ಎಂದು ಜಿಂಕೆ ನಂಬಿತು.
ಜಿಂಕೆ ಮನೆಯಿಂದ ಓಡಿ ಹೋಯಿತು! ಜಾಗ್ವಾರ್ ಮನೆಯಿಂದ ಓಡಿತು! ಇವರಿಬ್ಬರೂ ವಿರುದ್ಧ ದಿಕ್ಕಿನಲ್ಲಿ ಓಡಿದರು. ಅ ಕ್ಷಣದಿಂದ, ಜಾಗ್ವಾರ್ ಮತ್ತು ಜಿಂಕೆ ಒಟ್ಟಿಗೆ ಸೇರಿ ವಾಸಿಸಲಿಲ್ಲ.
Enjoyed this story?